Monday, August 24, 2015

ಮರಳುನಗಾಡಲ್ಲೊಂದು ಮಲೆನಾಡು!

 

ನೈಲು ನದಿಯ ತೀರದಲ್ಲಿ .....



 

ಅತ್ತೆ ಸೊಸೆಯರು.. ನೈಲು ನದಿಯ ತೀರದಲ್ಲಿ...




 

ನಮ್ಮ ಕಾರ್ಖಾನೆಯ ಹಿಂದೋಟದಲ್ಲಿ... 


ನಮ್ಮ ಕಾರ್ಖಾನೆಯ ಹಿಂದೋಟದಲ್ಲಿ... 

 

ಕಾರು ಗರಾಜಿನ ದ್ರಾಕ್ಷಿ ಬಳ್ಳಿಯ ಮಧ್ಯದಲ್ಲಿ ಗೂಡು ಕಟ್ಟಿ ಮೊಟ್ಟೆಗೆ ಕಾವು ಕೊಡುತ್ತಿರುವ ಪಾರಿವಾಳ.


ಕಾರು ಗರಾಜಿನ ದ್ರಾಕ್ಷಿ ಬಳ್ಳಿಯ ಮಧ್ಯದಲ್ಲಿ ಗೂಡು ಕಟ್ಟಿ ಮೊಟ್ಟೆಗೆ ಕಾವು ಕೊಡುತ್ತಿರುವ ಪಾರಿವಾಳ.





 

ನುಗ್ಗೇ ಗಿಡಗಳ ಸಾಲು...

ಕಾಯಿಯ ಭಾರದಿಂದ ಬಗ್ಗಿದ ನುಗ್ಗೇಗಿಡ....
 


 

ಕಹಿ ಬೇವಿನ ಗಿಡದ ಕೆಳಗೆ ಹುಟ್ಟಿರುವ ಮರಿ ಗಿಡ ಗಳು..... 

 

ನಿಂಬೆಗಿಡ ಹಾಗೂ ಹಾಗಲಕಾಯಿ ಬಳ್ಳಿಗಳು....

 

ನಿಂಬೆಗಿಡ ಹಾಗೂ ಹಾಗಲಕಾಯಿ ಬಳ್ಳಿಗಳು....

ಆಫೀಸಿನ ಮುಂದೋಟ ....
 

ಕಾರುಗಳನ್ನ ತಂಪಾಗಿಡುವ ಬೇವಿನ ಗಿಡಗಳು.....


ಮರಳುನಗಾಡಲ್ಲೊಂದು ಮಲೆನಾಡು!

ಅಚ್ಚ ಮಲೆನಾಡಿನಲ್ಲಿ ಹುಟ್ಟಿ ಬೆಳೆದು, ಹಸಿರೇ ಉಸಿರೆನ್ನುವ ಪತ್ನಿಯೊಡನೆ, ಸಂಪೂರ್ಣ ಮರಳುಗಾಡು ದೇಶವಾದ ಸುಡಾನಿಗೆ ಬಂದಿಳಿದೆ.  ಜನ ಬಳಕೆಯಲ್ಲಿರುವ ಜೋಕಿನ ಪ್ರಕಾರ ಇಲ್ಲಿ ಮೂರು ಕಾಲವಂತೆ. ಬೇಸಿಗೆ, ಅತಿ ಬೇಸಿಗೆ ಹಾಗೂ ಭಯಾನಕ ಬೇಸಿಗೆ. ೪೦% ತಾಪಮಾನ ನಮಗೆಲ್ಲ ಸಾಮಾನ್ಯವಾಗಿದೆ. ಆದರೆ ಹವಾಮಾನದಲ್ಲಿ ತೇವಾಂಶ ಅತಿ ಕಡಿಮೆ ಇರುವದರಿಂದ ಅಷ್ಟೊಂದು ಕಷ್ಟವಾಗೋಲ್ಲ.
ಪ್ರಗತಿಪರ ಕೃಷಿಕರು, ಬಳ್ಳಿಯನ್ನ ಮರವಾಗಿಸುವದು ಮರವನ್ನ ಬಳ್ಳಿಯಾಗಿಸುವದು ಇತ್ಯಾದಿ ಹವ್ಯಾಸದ ಜಾದೂಗಾರರ ಮನೆಯಿಂದ ಬಂದ  ಉಷಾಳಿಗೆ ಗಿಡ ಮರಗಳ ಸಹವಾಸ ಹೊಸತಲ್ಲ. ಆದರೆ ಕಾರ್ಟೂಮ್ ನಂತಹ ಸೂರ್ಯ ನಗರಿಯಲ್ಲಿ ಪುಕ್ಕಟೆ ಅತಿಯ್ಯಾಗಿ ಸಿಗುವ ಬಿಸಿಲು ಧೂಳಿನ ಮಧ್ಯದಲ್ಲಿ ಹಸಿರಿನ ಹರಿಕಾರ ಆಗುವದು ಕಷ್ಟ ಸಾಧ್ಯ. ಸದಾ ತುಂಬಿ ಹರಿಯುತ್ತಿರುವ ಜೀವನದಿ ನೈಲ್, ಅಸಾಧ್ಯವನ್ನೂ ಸಾದ್ಗ್ಯವಾಗಿಸುವ ಭರವಸೆ ಕೊಡುವದು.
 

ಸಾವಯವ ಕೃಷಿ, ಪರಿಸರ ಅಭಿವೃಧ್ಧಿ ಬಗೆಗೆ ಪ್ರತಿದಿನ ಧರ್ಮಪತ್ನಿಯ ಹಸಿರಾದ ಭಾಷಣ ಕೇಳಿ, ತವರೂರು ಬಿಟ್ಟು ಇಷ್ಟು ದೂರ 

ಬಂದಿರುವಾಕೆಗೆ ಮನವ ಮುದಗೊಳಿಸಲು ನಾನೂ ಹಸಿರು ಯಜ್ನವನ್ನ ಹವ್ಯಾಸ ಮಾಡಿಕೊಂಡೆ. ಕಳೆದ ಹನ್ನೊಂದು ವರ್ಷದಲ್ಲಿ ನಮ್ಮದೇ ಆದ ವೃಕ್ಷ ಕಾಶಿಯನ್ನು ಬೆಳಸಿ, ಪೋಷಿಸಿ ಮರಳುಗಾಡಿನ ಮಲೆನಾಡನ್ನ ಹಮ್ಮಿಕೊಂಡೆವು

ಮೊದಲು ಮನೆಯ ಸುತ್ತ ಹೂದೋಟ, ಹುಲ್ಲುಗಾವಲು ಬೆಳೆಸಿದೆವು. ಆಮೇಲೆ ನಮ್ಮ ಕಾರ್ಖಾನೆಯ ಸುತ್ತಮುತ್ತಲೂ ಹಸಿರುಗೋಳಿಸಲೆಂದು ಕಹಿ  ಬೇವಿನ ಗಿಡಗಳನ್ನ ಬೆಳೆಸಿದೆವು. ಇಂದು ಅದೇ ಗಿಡಗಳು ಮರವಾಗಿವೆ. ಆ ಮರಗಳ ಕೆಳಗೆ ಬೀಜಗಳು ಬಿದ್ದು ಹೊಸ ಗಿಡಗಳು ಹುಟ್ಟಿವೆ. ಬೇವಿನ ಮರಗಳು  ನಮ್ಮ ಭಾರಿ ನೀರಡಿಕೆ (ಪೆಟ್ರೋಲಡಿಕೆ ಅನ್ನಬಹುದೇನೋ ) ಇರುವ ಕಾರುಗಳಿಗೆ ನೆರಳು ನೀಡುತ್ತಿವೆ! ತಾವು ಮಾಲಿನ್ಯವನ್ನ ಹೀರಿ ನಮಗೆ ಆಮ್ಲಜನಕ ನೀಡುತ್ತಿವೆ. ಸೊಳ್ಳೆಗಳನ್ನು ಓಡಿಸುತ್ತಿವೆ. ಎಲೆಗಳು  anti septic ಆಗಿ ಕೆಲಸ ಮಾಡುತ್ತವೆ. ಹೊಸದಾಗಿ ಹೂ ಬಿಟ್ಟಾಗ ತುಂಬಾ ಸುಂದರ ಪರಿಮಳ. ಬೀರುತ್ತವೆ.

 ಮನೆಗೆ ಬೇಕಾಗುವಷ್ಟು ಕರಿ ಬೇವು, ಶುಂಟಿ, ಬಸಳೆ ಸೊಪ್ಪು, ಪುದೀನ, ಅರಿಶಿಣ, ಸಾಂಬಾರ ಸೊಪ್ಪು, ಇತ್ಯಾದಿಗಳನ್ನ ಮನೆಯ ಮುಂದೋಟದಲ್ಲಿ ಬೆಳೆಸಿದರೆ, ಬಾಂಧವರಿಗೂ ಬೇಕಾಗುವಷ್ಟುಪಪ್ಪಾಳೆ, ನಿಂಬು, ಹಾಗಲಕಾಯಿ, ನುಗ್ಗೆ ಕಾಯಿಗಳನ್ನ ಕಾರ್ಖಾನೆಯ ಹಿಂದೋಟದಲ್ಲಿ ಬೆಳಸಿದ್ದಾಳೆ.

ನಿನ್ನೆ ವಿಶ್ವ ಪರಿಸರ ದಿನ ಆಚರಿಸಲಾಯಿತು. ಎಲ್ಲೆಡೆ ಮುಖಂಡರು, ಪ್ರಜಾ ಪ್ರತಿನಿಧಿಗಳು ಗಿಡಗಳನ್ನ ನೆಟ್ಟರು. ನಮಗೆ ಪ್ರತಿ ದಿನ ಪರಿಸರ ದಿನವೇ ಸೈ. ೪೯ ಸೆಂಟಿಗ್ರೇಡ್ ತಾಪಮಾನದಲ್ಲಿ ಇರುವ ಗಿಡಗಂಟಿಗಳನ್ನ ರಕ್ಷಿಸಿಕೊಂಡು, ಮಳೆಬಿದ್ದ ತಕ್ಷಣ ನೆಡಲೆಂದು ಹೊಸ ಗಿಡಗಳನ್ನ ಜೋಪಾನವಾಗಿ ಬೆಳೆಸಿಟ್ಟು ಕಾಯುವುದು ನಮ್ಮ ಪರಿಸರ ದಿನದಾಚಾರಣೆ.

೮೦ ರ ದಶಕದಲ್ಲಿ ದಿಲ್ ಇರದ ದಿಲ್ಲಿಯಲ್ಲಿರುವಾಗ, ಬಾಲ್ಕನಿಯಲ್ಲಿಟ್ಟ ಗಿಡಗಳನ್ನ ಬಾತ್ ರೂಮಿನಲ್ಲಿ ಜೋಡಿಸಿಟ್ಟು, ಶವರ್ ನಿಂದ ಒಂದೊಂದೇ ಹನಿ ಒಂದು ಹಲಗೆಯ  ಮೇಲೆ ಬೀಳುವಂತೆ ಇಟ್ಟು, ಬಿದ್ದು ಹದವಾಗಿ ಗಿಡಗಳ ಮೇಲೆ ಸಿಡಿಯುವಂತೆ ಇಟ್ಟು  ರಜೆಯಲ್ಲಿ ಹೋಗುತ್ತಿದ್ದೆವು. ವಾಪಸು ಬಂದಾಗ ಗಿಡಗಳ ಅವಸ್ಥೆ ಕಂಟೇನರ್ನಲ್ಲಿ ಅಡಗಿ ಕುಳಿತು ಪಾಷ್ಟಾತ್ತ ದೇಶಗಳಿಗೆ ಗುಳಿ ಹೋಗುವ ಥರ್ಡ್ ವರ್ಲ್ಡ್ ವಲಸೆಗಾರರಂತೆ ಇರುತ್ತಿತ್ತು.  ಇಲ್ಲಿಯೂ ಅಷ್ಟೇ, ಮನೆ ಕಾಯುವ ಹುಡುಗ ಒಮ್ಮೊಮ್ಮೆ ಗಿಡಗಳಿಗೂ ರಮಜಾನಿನ ಉಪವಾಸ ಮಾಡಿಸಿ, ಬರುವಷ್ಟರಲ್ಲಿ ಹಸಿದ ದನ ಕರುಗಳು ಹುಲ್ಲಿಗೆ ನೀರಿಗೆ ಅಂಬಾ ಎಂದಂತೆ ಅನ್ನಿಸುವದು.
ಇನ್ನು ತುಳಸಿ, ಮಲ್ಲಿಗೆ, ದಾಸವಾಳು, ಶಂಕಪುಷ್ಪ ಗಿಡಗಳು ಸಾಕಷ್ಟು ಬೆಳೆಸಿದರೂ ಗಣೇಶ ಚತುರ್ಥಿಗೆ ಮನಿ ಪ್ಲಾಂಟ್ ಅಲಂಕಾರದ ಕಥೆಯನ್ನು ಮುಂದಿನ ಹೊತ್ತಿಗೆಯಲ್ಲಿ ಮುಂದುವರಿಸೋಣ.